ಲೈಂಗಿಕ ಮತ್ತು ಲಿಂಗಾಧಾರಿತ ಹಿಂಸಾಚಾರದ (ಎಸ್‌ಜಿಬಿವಿ) ಕುರಿತು ತಿಳಿಸುವ ಈ ಕತೆಗಳು ಮಹಿಳೆಯರ ಮೇಲೆ ಎಸಗಲಾಗುವ ಹಿಂಸೆಗೆ ಅನೇಕ ಮುಖಗಳಿವೆ ಎನ್ನುವುದನ್ನು ತೋರಿಸುತ್ತದೆ. ಈ ಸರಣಿ ಯುಲೈಂಗಿಕ ವೃತ್ತಿ, ವಲಸೆ, ಲಿಂಗ ಬದಲಾವಣೆ ಸಂಬಂಧಿಸತ ಕತೆಗಳು ಮತ್ತು ತನ್ನ ಮೇಲಧಿಕಾರಿಯ ವಿರುದ್ಧ ಹೋರಾಡಿದ ಮಹಿಳೆಯ ಕತೆಯನ್ನು ಒಳಗೊಂಡಿದೆ. ಮಹಿಳೆಯರು ಹೇಗೆ ವರ್ತಿಸಬೇಕು ಎನ್ನುವುದನ್ನು ಹೇಳುವ ಪಿತ್ರಪ್ರಭುತ್ವದ ನಿಯಮಗಳ ಕತೆ, ಮಹಿಳೆಯರ ಮೇಲಿನ ಹಿಂಸಾಚಾರವನ್ನು ಸಾಮಾನ್ಯಗೊಳಿಸುವ ಕತೆ ಮತ್ತು ʼಪ್ರೀತಿಯʼ ಸೋಗಿನಲ್ಲಿ ಹೆಣ್ಣಿನ ಅಪಹರಣದ ಕತೆ, ಇಂತಹ ಪ್ರಕರಣಗಳಲ್ಲಿ ಕಾನೂನು ಹೇಗೆ ಮತ್ತು ಎಷ್ಟು ವೇಗವಾಗಿ ಚಲಿಸುತ್ತದೆ ಎನ್ನುವುದನ್ನು ಈ ಸರಣಿಯಲ್ಲಿ ಕತೆಗಳು ವಿವರಿಸುತ್ತದೆ. ಇದು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ) ಮತ್ತು ಮೆಡಿಸಿನ್ಸ್ ಸಾನ್ಸ್ ಫ್ರಂಟಿಯರ್ಸ್ (ಎಂಎಸ್‌ಎಫ್)/ ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್, ಇಂಡಿಯಾ ಸಹಯೋಗದಲ್ಲಿ ಪ್ರಕಟವಾದ ಸರಣಿ