ಡಾ. ಬಾಬಾಸಾಹೇಬ್ ಅಂಬೇಡ್ಕರ್... ಓರ್ವ ಮಹಾನ್ ನಾಯಕನ ಸ್ಮರಣೆ
ಬಾಬಾಸಾಹೇಬ್ ಅಂಬೇಡ್ಕರ್ ಓರ್ವ ವಿದ್ವಾಂಸ, ಸಾಮಾಜಿಕ ಸುಧಾರಕ ಮತ್ತು ಸಮಾನತೆಗಾಗಿ ಹೋರಾಡುವ ವಕೀಲರಾಗಿದ್ದರು, ದಲಿತರ ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದವರು. ಅವರು ಭಾರತದ ಇತಿಹಾಸ ಕಂಡ ಅತ್ಯಂತ ಶ್ರೇಷ್ಠ ಪತ್ರಕರ್ತರಲ್ಲಿ ಒಬ್ಬರು. ಅವರ ಸಮಾನತೆಯ ತುಡಿತ ಮತ್ತು ನ್ಯಾಯದ ಹುಡುಕಾಟದ ಗುಣವನ್ನು ನಾವೆಲ್ಲರೂ ಆಳವಡಿಸಿಕೊಳ್ಳಬೇಕಾದ ತುರ್ತು ಎಂದಿಗಿಂತಲೂ ಹೆಚ್ಚಿದೆ. ಡಾ. ಬಿ ಆರ್ ಅಂಬೇಡ್ಕರ್ ಅವರ ದೀರ್ಘ ಪರಂಪರೆಯ ಕುರಿತಾದ ಹತ್ತು ಹಲವು ಬರಹಗಳಿವೆ. ಇವುಗಳನ್ನು ಜನರನ್ನು ಅಂಬೇಡ್ಕರ್ ಅವರ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ ಎಂದು ಪರಿ ನಂಬುತ್ತದೆ