ಪುರಾಣ, ಪ್ರಕೃತಿ ಮತ್ತು ದೈವತ್ವದ ಆಚರಣೆ, ಋತುಗಳ ಬದಲಾವಣೆ, ಉತ್ತಮ ಬೆಳೆಯ ಸಂಭ್ರಮ – ಭಾರತೀಯ ಹಬ್ಬಗಳು ಇವೆಲ್ಲವನ್ನೂ ಒಳಗೊಂಡಿವೆ. ಸಮುದಾಯಗಳನ್ನು ಒಟ್ಟುಗೂಡಿಸುವ ಇವು, ಧಾರ್ಮಿಕ ವಿಭಜನೆಗಳನ್ನು ವಿಚಿತ್ರ ರೀತಿಯಲ್ಲಿ ಜೋಡಿಸುತ್ತವೆ ಮತ್ತು ಲಿಂಗ ಮತ್ತು ಜಾತಿಯ ಗಡಿಗಳನ್ನು ಮೀರಿರುತ್ತವೆ. ಇವು ಸಾಂಪ್ರದಾಯಿಕತೆಗೆಷ್ಟೇ ಮೀಸಲಾಗದೆ ದೈನಂದಿನ ಬದುಕು ಮತ್ತು ಶ್ರಮದ ಏಕತಾನತೆಯಿಂದ ವಿರಾಮವನ್ನು ಒದಗಿಸುತ್ತವೆ. ವೈವಿಧ್ಯಮಯ ಸಮುದಾಯಗಳ ಕುಶಲಕರ್ಮಿಗಳ ಕೆಲಸ ಮತ್ತು ಕಲೆಯಿಲ್ಲದೆ ಔತಣಕೂಟಗಳು, ಸಂಗೀತ, ನೃತ್ಯ ಮತ್ತು ಪೂಜೆಯು ಸಾಧ್ಯವಿಲ್ಲ. ಇಲ್ಲಿರುವ ಕಥಾನಕಗಳು ನಮ್ಮ ದೇಶದ ವೈವಿಧ್ಯಮಯ ಹಬ್ಬಗಳು ಮತ್ತು ಆಚರಣೆಗಳನ್ನು ದಾಖಲಿಸಿವೆ