15 ವರ್ಷದ ಬಾಲಕ ವಿಕ್ರಮ್ ಅಗಸ್ಟ್ ತಿಂಗಳಿನಲ್ಲಿ ಮನೆ ಬಿಟ್ಟು ಓಡಿ ಹೋದಾಗ, ಕಾಮಾಟಿಪುರದಲ್ಲಿ ಲೈಂಗಿಕ ಕಾರ್ಯಕರ್ತೆಯಾಗಿರುವ ಅವನ ತಾಯಿ ಮರಳಿ ಮನೆಗೆ ಕರೆತಂದರು. ಅವನು ಇದಕ್ಕೂ ಮೊದಲೂ ಮನೆ ಬಿಟ್ಟು ಓಡಿ ಹೋಗಿದ್ದ. ಇದರಿಂದಾಗಿ ಅವನು ಹಲವು ಬಡಿದಾಟಗಳಲ್ಲಿ ಪಾಲ್ಗೊಳ್ಳಬೇಕಾಯಿತು, ಹಲವು ಬಗೆಯ ಕೆಲಸಗಳನ್ನು ಮಾಡಬೇಕಾಯಿತು. ಅವನು ಇದೆಲ್ಲವನ್ನೂ ಮಾಡಿದ್ದು ಒಂದು ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ